ತಪನ್ ಮಿಶ್ರಾರವರು ಅಹಮದಬಾದ್ ನ ಸ್ಪೇಸ್ ಅಪ್ಲಿಕೇಷನ್ ಸೆಂಟರ್ನ ಭಾರತೀಯ ವೈಜ್ಞಾನಿಕ ನಿರ್ದೇಶಕರಾಗಿದ್ದಾರೆ. ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ , ಬಾಹ್ಯಾಕಾಶ ಅನ್ವಯಗಳ ಕೇಂದ್ರದ ನಿರ್ದೇಶಕರಾಗಿದ್ದರು. = ಜನನ = ತಪನ್ ಮಿಶ್ರಾ ರವರು ೧೯೬೧ ರಲ್ಲಿ ಒಡಿಶಾದ ರಾಯಗಡದಲ್ಲಿ ಜನಿಸಿದರು. = ಶಿಕ್ಷಣ = ೧೯೮೪ ರಲ್ಲಿ ಜೆ.ಸಿ.ಬೋಸ್ ನ್ಯಾಷನಲ್ ಟ್ಯಾಲೆಂಟ್‌ ಸರ್ಚ್ (ಜೆಬಿಎನ್ಎಸ್ಟಿಎಸ್) ಸ್ಕಾಲರ್ ಆಗಿ ಜಾದವ್ಪುರ್ವ ಯುನಿವರ್ಸಿಟಿ, ಕಲ್ಕತ್ತಾದಿಂದ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್,ಅಧ್ಯಯನ ಮಾಡಿದರು. = ವೃತ್ತಿಜೀವನ = ಮಿಶ್ರಾ ರವರು ತಮ್ಮ ವೃತ್ತಿಜೀವನವನ್ನು ಡಿಜಿಟಲ್ ಹಾರ್ಡ್‌ವೇರ್ ಎಂಜಿನಿಯರ್ ಆಗಿ ಪ್ರಾರಂಭಿಸಿದರು ಹಾಗೂ ಮೈಕ್ರೋವೇವ್ ರಿಮೋಟ್‌ ಸೆನ್ಸಿಂಗ್ ಪೇಲೋಡ್ಗಳಲ್ಲಿ ಸ್ಪೇಸ್ ಅಪ್ಲಿಕೇಷನ್‌ ಸೆಂಟರ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ೧೯೯೦ ರಲ್ಲಿ ಜರ್ಮನ್ ಏರೋಸ್ಪೇಸ್ ಏಜೆನ್ಸಿಯಲ್ಲಿನ ಅತಿಥಿ ವಿಜ್ಞಾನಿಯಾಗಿ ಎಸ್ಎಆರ್ ()ಡಾಟಾದ ನೈಜ - ಸಮಯ ಸಂಸ್ಕರಣೆಗೆ ಅವರು ಆಲ್ಗರಿದಮ್ ಅನ್ನು ಬರೆದರು. ಅವರು ೧೯೯೫ - ೧೯೯೯ ರ ಅವಧಿಯಲ್ಲಿ ಐಆರ್ ಎಸ್ - ಪಿ4 ಗಾಗಿ ಬಹು - ಆವರ್ತನ ಸ್ಕ್ಯಾನಿಂಗ್ ಮೈಕ್ರೋವೇವ್ ರೇಡಿಯೋ ಮೀಟರ್ (ಎಮ್ಎಸ್ಎಮ್ಆರ್) ಪೇಲೋಡ್ ಸಿಸ್ಟಮ್ ಎಂಜಿನಿಯರಿಂಗ್ ನಿರ್ವಹಿಸುತ್ತಿದ್ದರು. ಅವರು ರಿಸ್ಯಾಟ್ -1 ರ ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡರ್(ಎಸ್ಎಆರ್) ಅಭಿವೃದ್ಧಿಯ ವಿನ್ಯಾಸದಲ್ಲಿ ತೊಡಗಿದ್ದರು. ೨೦೧೫, ಫೆಬ್ರವರಿಯಲ್ಲಿ ನಿರ್ದೇಶಕರಾಗಿ ನೇಮಕವಾಗುವ ಮೊದಲು ಅವರು ಬಾಹ್ಯಾಕಾಶ ಅನ್ವಯಗಳ ಕೇಂದ್ರದ ಮೈಕ್ರೋವೇವ್ ರಿಮೋಟ್ ಸಂವೇದಿ ಪ್ರದೇಶದ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಓಶಿಯನ್ ಸ್ಯಾಟ್ -1 ಮತ್ತು ಸ್ಕ್ಯಾನಿಂಗ್ ಸ್ಕ್ಯಾಟರ್ಮೀಟರ್ನ ಓಶಿಯನ್ ಸ್ಯಾಟ್ -2 ಮತ್ತು ಸ್ಕ್ಯಾನಿಂಗ್ ಸ್ಕ್ಯಾಟರ್ ಮೀಟರ್‌ಗಳ ಬಹು - ಆವರ್ತನ ಸ್ಕ್ಯಾನಿಂಗ್ ಮೈಕ್ರೋವೇವ್ ರೇಡಿಯೋಮೀಟರ್ ಸಾಧನದ ಅಭಿವೃದ್ಧಿಯೊಂದಿಗೆ ಸಹ ಸಂಬಂಧ ಹೊಂದಿದ್ದರು. = ಸದಸ್ಯತ್ವ = ಅವರು ೨೦೦೭ರಲ್ಲಿ ಭಾರತೀಯ ರಾಷ್ಟ್ರೀಯ ಅಕಾಡೆಮಿ ಆಫ್ ಇಂಜಿನಿಯರಿಂಗ್ ಫೆಲೋ ಆಗಿ ಆಯ್ಕೆಯಾದರು. ಅವರು ೨೦೦೮ರಲ್ಲಿ ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಆಸ್ಟ್ರೊನಾಟಿಕ್ಸ್ ನ ಸದಸ್ಯರಾಗಿದ್ದರು. ಅವರಿಗೆ ಐದು ಹಕ್ಕು ಸ್ವಾಮ್ಯಗಳನ್ನು ಮತ್ತು ಇಪ್ಪತ್ತೈದು ಪತ್ರಿಕೆಗಳನ್ನು ತಮ್ಮ ಕ್ರೆಡಿಟ್ಗೆ ನೀಡಲಾಗಿದೆ. = ಪ್ರಶಸ್ತಿಗಳು = ವಿಕ್ರಮ್ ಸಾರಾಭಾಯ್ ಸಂಶೋಧನಾ ಪ್ರಶಸ್ತಿ - ೨೦೦೪. ಇಸ್ರೋ ಮೆರಿಟ್ ಪ್ರಶಸ್ತಿ - ೨೦೦೮. = ಉಲ್ಲೇಖಗಳು =